Chanakya Niti: ಆದಾಯ, ಹಣಕಾಸಿಗೆ ಸಂಬಂಧಿಸಿದ ಈ ಸೀಕ್ರೆಟ್‌ಗಳನ್ನು ಯಾರೊಂದಿಗೂ ಶೇರ್‌ ಮಾಡಾರದು

ಪ್ರತಿಯೊಬ್ಬರೂ ಸಹ ತಮ್ಮ ಆದಾಯ ಮತ್ತು ಆರ್ಥಿಕ ವಿಷಯಗಳನ್ನು ಪ್ರೀತಿಪಾತ್ರರೊಂದಿಗೆ ಹಂಚಿಕೊಳ್ಳುತ್ತಾರೆ. ಸಂಬಳದಿಂದ ಹಿಡಿದು ತಮ್ಮ ಬ್ಯಾಂಕ್ ಬ್ಯಾಲೆನ್ಸ್‌ವರೆಗೆ ಎಲ್ಲವನ್ನೂ ಹಂಚಿಕೊಳ್ಳುತ್ತಾರೆ ಆದರೆ ಹಣಕಾಸಿಗೆ ಸಂಬಂಧಿಸಿದ ಪ್ರತಿಯೊಂದು ವಿಚಾರಗಳನ್ನು ಬೇರೆವರೊಂದಿಗೆ ಹಂಚಿಕೊಳ್ಳುವುದು ಸರಿಯಲ್ಲ ಎಂದಿದ್ದಾರೆ ಆಚಾರ್ಯ ಚಾಣಕ್ಯ. ಅವರ ಪ್ರಕಾರ ನಾವು ಹೀಗೆ ಹಣಕಾಸಿಗೆ ಪ್ರತಿಯೊಂದು ಸೀಕ್ರೆಟ್‌ಗಳನ್ನು ಇತರರ ಬಳಿ ಹಂಚಿಕೊಂಡಾಗ, ಇದರಿಂದ ಭವಿಷ್ಯದಲ್ಲಿ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆ ಇರುತ್ತದೆ. ಹಾಗಿದ್ರೆ ಹಣಕಾಸಿಗೆ ಸಂಬಂಧಿಸಿ ಯಾವೆಲ್ಲಾ ವಿಷಯಗಳನ್ನು ರಹಸ್ಯವಾಗಿಟ್ಟರೆ ಒಳ್ಳೆಯದು ಎಂಬುದನ್ನು ನೋಡೋಣ ಬನ್ನಿ.

ನಿಮ್ಮ ನಿಖರ ಸಂಬಳದ ಬಗ್ಗೆ ಯಾರಿಗೂ  ಹೇಳಬೇಡಿ:

ಆಚಾರ್ಯ ಚಾಣಕ್ಯರ ಪ್ರಕಾರ, ಸಂಬಳದ ಬಗ್ಗೆ ಎಲ್ಲರೊಂದಿಗೂ ಹಂಚಿಕೊಳ್ಳುವುದು ಸರಿಯಲ್ಲ. ವಾಸ್ತವವಾಗಿ, ಜನರು ನಿಮ್ಮ ಸಂಬಳವನ್ನು ತಿಳಿದ ನಂತರ ತಮ್ಮನ್ನು ತಾವು ನಿಮ್ಮೊಂದಿಗೆ ಹೋಲಿಸಿಕೊಳ್ಳುತ್ತಾರೆ. ಮತ್ತು ನಿಮ್ಮ ಬಗ್ಗೆ ಅಸೂಯೆಯನ್ನು ಬೆಳೆಸಿಕೊಳ್ಳುವ ಸಾಧ್ಯತೆ ಇರುತ್ತದೆ. ಇದಲ್ಲದೆ ನೀವು ಇತರರಿಂತ ಕಡಿಮೆ ಸಂಬಳ ಪಡೆದರೆ ಅವರು ನಿಮ್ಮ ಕೀಳಾಗಿ ಕಾಣುವ ಸಾಧ್ಯತೆ ಇರುತ್ತದೆ. ಆದ್ದರಿಂದ ನಿಮ್ಮ ಸಂಬಳದ ಬಗ್ಗೆ ಯಾರಿಗೂ ಹೇಳಬೇಡಿ.