ಉತ್ತಮ ನಿದ್ರೆಗಾಗಿ ರಾತ್ರಿ ಮಲಗುವ ಮುನ್ನ ಈ ಸಿಂಪಲ್‌ ಟಿಪ್ಸ್‌ ಪಾಲಿಸಿ

ಆರೋಗ್ಯಕರ ಜೀವನವನ್ನು ನಡೆಸಲು ಉತ್ತಮ ಆಹಾರದಂತೆ ಉತ್ತಮ ನಿದ್ರೆಯೂ (sleep) ಸಹ ತುಂಬಾನೇ ಮುಖ್ಯ. ಉತ್ತಮ ನಿದ್ರೆಯು ಮನಸ್ಸು ಮತ್ತು ದೇಹವನ್ನು ರಿಫ್ರೆಶ್‌ ಮಾಡುತ್ತದೆ. ಅದಕ್ಕಾಗಿಯೇ ತಜ್ಞರು  ಪ್ರತಿಯೊಬ್ಬರೂ 7 ರಿಂದ 8 ಗಂಟೆಗಳ ಕಾಲ ಉತ್ತಮ ನಿದ್ರೆ ಪಡೆಯಲೇಬೇಕು ಶಿಫಾರಸ್ಸು ಮಾಡೋದು. ಆದರೆ ಇಂದಿನ ಬ್ಯುಸಿ ಜೀವನದಲ್ಲಿ ಅನೇಕರಿಗೆ ಸರಿಯಾಗಿ ನಿದ್ರೆ ಮಾಡಲು ಸಮಯವೇ ಸಿಗೋದಿಲ್ಲ, ಇನ್ನೂ ಕೆಲವರಿಗೆ ಎಷ್ಟೇ ಪ್ರಯತ್ನಪಟ್ಟರೂ ರಾತ್ರಿ ಸರಿಯಾಗಿ ನಿದ್ರೆಯೇ ಬರೋದಿಲ್ಲ. ನಿಮಗೂ ಕೂಡ ಇದೇ ರೀತಿ ರಾತ್ರಿ ಮಲಗಿದಾಗ ಸುಮಾರು ಹೊತ್ತಿನವರೆಗೆ ನಿದ್ರೆಯೇ ಬರೋದಿಲ್ವಾ? ಹಾಗಿದ್ರೆ ಈ ಒಂದಷ್ಟು ಸಲಹೆಗಳನ್ನು ಪಾಲಿಸುವ ಮೂಲಕ ಆರಾಮದಾಯಕವಾಗಿ ನಿದ್ರಿಸಿ.