ತೆಲುಗು ಚಿತ್ರರಂಗದ ಹಿರಿಯ ನಟ ಗಿರಿ ಬಾಬು ನಿಧನ

ಹಲವಾರು ತೆಲುಗು ಸಿನಿಮಾಗಳಲ್ಲಿ ನಾಯಕ, ಪೋಷಕ ಪಾತ್ರ, ವಿಲನ್​​, ಹಾಸ್ಯ ಪಾತ್ರಗಳಲ್ಲಿ ನಟನೆ ಮಾಡಿದ್ದ ಹಿರಿಯ ನಟ ಗಿರಿ ಬಾಬು ಇಂದು (ನವೆಂಬರ್ 14) ನಿಧನ ಹೊಂದಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು. ಅವರು ಕಳೆದ ಕೆಲ ಸಮಯದಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದರು. ಹೈದರಾಬಾದ್​​ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಅವರು ಕೊನೆ ಉಸಿರೆಳೆದಿದ್ದಾರೆ. ಅವರ ನಿಧನದ ಸುದ್ದಿಯಿಂದ ತೆಲುಗು ಚಲನಚಿತ್ರರಂಗದಲ್ಲಿ ತೀವ್ರ ವಿಷಾದ ಮೂಡಿದೆ.

ತೆಲುಗು ಚಿತ್ರರಂಗದಲ್ಲಿ ಅವರು ಅವರು ವಿಭಾಗಗಳಲ್ಲಿ ಕೆಲಸ ಮಾಡಿದ್ದರು. ನಟನೆ ಮಾತ್ರವೇ ಅಲ್ಲದೆ, ಸಿನಿಮಾ ನಿರ್ದೇಶನ ಮತ್ತು ನಿರ್ಮಾಣವನ್ನೂ ಸಹ ಅವರು ಮಾಡಿದ್ದರು. 1943 ಜೂನ್ 8 ರಂದು ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಕನಿಗಿರಿ ಮಂಡಲದ ರಾವೂರು ಗ್ರಾಮದಲ್ಲಿ ಮಧ್ಯಮ ವರ್ಗದ ರೈತ ಕುಟುಂಬದಲ್ಲಿ ಜನಿಸಿದ ಇವರ ಮೂಲ ಹೆಸರು ಶೇಷಗಿರಿ ರಾವ್. ಚಿಕ್ಕ ವಯಸ್ಸಿನಿಂದಲೇ ನಟನೆ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದ ಗಿರಿಬಾಬು, ಕಾಲೇಜು ದಿನಗಳಲ್ಲೇ ನಾಟಕಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಹಲವಾರು ನಾಟಕ ಸಂಘಗಳಲ್ಲಿ ತಮ್ಮ ಅಭಿನಯದಿಂದ ಪ್ರಶಂಸೆಯನ್ನು ಪಡೆದರು.